ಅಭಿಪ್ರಾಯ / ಸಲಹೆಗಳು
ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಬಗ್ಗೆ

     ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಹಾಗೂ ಗ್ರಾಮಗಳಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಮುಖಾಂತರ ಪ್ರಗತಿಯಲ್ಲಿರುವ ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ವಿಕೇಂದ್ರಿಕರಣದ ಮೇಲುಸ್ತುವಾರಿಯನ್ನು ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಡಿ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯವನ್ನು ಸ್ಥಾಪಿಸಲಾಗಿದೆ.

 

     1993 ರಲ್ಲಿ ಭಾರತದ ಸಂವಿಧಾನದ 73ನೇ ತಿದ್ದುಪಡಿಯ ಪರಿಣಾಮ “ಅನುದಾನ (ನಿಧಿ) ಪ್ರಕಾರ್ಯಗಳು ಹಾಗೂ ಕಾರ್ಯ ನಿರ್ವಾಹಕ” (Funds, Functions & Functionaries) ಇವುಗಳ ತತ್ವದ ಆಧಾರದ ಮೇಲೆ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್‌, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯಿತಿಗಳನ್ನೊಳಗೊಂಡಂತೆ 3 ಸ್ಥರದ ಪಂಚಾಯತ್‌ ರಾಜ್‌ ಸಂಸ್ಥೆಗಳ ಆಡಳಿತವು ಕಾರ್ಯ ನಿರತವಾಗಿದೆ.

 

     ಪ್ರಜಾ ಪ್ರಭುತ್ವದ ತತ್ವಗಳಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ಕೆ 1993 ಹಾಗೂ ಸಂಗತ ತಿದ್ದುಪಡಿಗಳಲ್ಲಿ ಮಾಡಿದ ಶಾಸನಗಳನ್ವಯ ಅವುಗಳ ದ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸಲು ಪಂಚಾಯತ್‌ ರಾಜ್‌ ಆಯುಕ್ತಾಲಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇತರ ಇಲಾಖೆಗಳು, ಬಾಹ್ಯ ಮೂಲದ ಸಂಸ್ಥೆಗಳ ಸಹಯೋಗ ಹಾಗೂ ಸಹಭಾಗಿತ್ವದೊಂದಿಗೆ ವಿಕೇಂದ್ರಿಕರಣ ಪ್ರಕ್ರಿಯೆಯ ಮೇಲುಸ್ತುವಾರಿಯ ಜವಬ್ದಾರಿ ಹೊಂದಿರುತ್ತದೆ.      ಮೇಲ್ಕಂಡ ಸಂಸ್ಥೆಗಳು ಶಾಸನಬದ್ಧ ಅವಕಾಶಗಳಂತೆ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಶಕ್ತ ಹಾಗೂ ಕಾರ್ಯ ಸಾಧ್ಯ ಆಡಳಿತವನ್ನು ಖಾತರಿಪಡಿಸುವುದು ಆಯುಕ್ತಾಲಯದ ಗುರಿಯಾಗಿರುತ್ತದೆ.

 

     ಇಲಾಖೆಯ ಒಡೆತನದಲ್ಲಿ ನಿರ್ವಹಿಸಲಾಗುತ್ತಿರುವ “ಪಂಚತಂತ್ರ 2.0” – ಈ ವೇದಿಕೆಯು ಒಂದು ಗಣಕೀಕೃತ ವ್ಯವಸ್ಥೆಯಾಗಿದ್ದು, ಪಂಚಾಯತ್‌ ರಾಜ್‌ ಸಂಸ್ಥೆಗಳ ಆಡಳಿತದಲ್ಲಿ ಸಮಗ್ರ ಹಾಗೂ ಕೇಂದ್ರಿಕೃತವಾಗಿ ಉಸ್ತುವಾರಿಗೆ ಅನುವು ಮಾಡಿಕೊಡುವ ಸಾಧನವಾಗಿದೆ. ಈ ಸಾಧನದಿಂದ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕತೆ ಕಾರ್ಯ ಸಾಧ್ಯವಾಗಿದೆ.

 

ಇಲಾಖೆಯ ದೃಷ್ಟಿಕೋನ:

     ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲಕ ವಿಕೇಂದ್ರಿಕೃತ ಹಾಗೂ ಸಹಭಾಗಿತ್ವದ ಸ್ಥಳೀಯ ಆಡಳಿತವನ್ನು ಸ್ಥಾಪಿಸುವುದು.

 

ಧ್ಯೇಯ:

  • ಗ್ರಾಮೀಣ ಸಮೂಹದ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಸಬಲೀಕರಣಗೊಳಿಸುವುದು.

  • ಬಡ ಗ್ರಾಮೀಣ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವಕಾಶಗಳನ್ನು ಕಲ್ಪಿಸುವುದು.

  • ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ದಕ್ಷ ಹಾಗೂ ಜವಬ್ದಾರಿಯುತ ಆಡಳಿತವನ್ನು ನೀಡುವುದು.

  • ವಿಶೇಷ ಗುಂಪುಗಳನ್ನೊಳಗೊಂಡಂತೆ ಸೇವೆಗಳ ವಿತರಣೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್‌ ಸಂಸ್ಥೆಗಳನ್ನು ಸಬಲೀಕರಣಗೊಳಿಸುವುದು ಹಾಗೂ ಜವಬ್ದಾರಿಯುತವಾಗಿ ದಕ್ಷತೆಯಿಂದ ಹಾಗೂ ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸುವುದು.

  • “ಪಂಚತಂತ್ರ 2.0”- ಗ್ರಾಮೀಣ ಸಮೂಹಕ್ಕೆ ಸಂಪರ್ಕ ಕಲ್ಪಿಸುವಂತಹ ಈ ಸಾಧನಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳ ಆಡಳಿತದಲ್ಲಿ ಸಮಗ್ರ ಹಾಗೂ  ಮೇಲುಸ್ತುವಾರಿಯಿಂದ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕತೆ ಹಾಗೂ ಜವಬ್ದಾರಿಯುತವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುವುದು.

ಉದ್ಧೇಶಗಳು:

  • ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ದಕ್ಷ, ಜವಬ್ದಾರಿಯುತ ಹಾಗು ಸ್ಪಂದಿಸುವಂತೆ ಮಾಡಲು ಅವುಗಳನ್ನು ಸಬಲೀಕರಣಗೊಳಿಸುವುದು.

  • ಪಂಚಾಯತ್‌ ರಾಜ್‌ ಸಂಸ್ಥೆಗಳ ಕಾರ್ಯ ನಿರ್ವಾಹಕರು/ ಸಿಬ್ಬಂದಿ ಮತ್ತು ಚುನಾಯಿತ ಪ್ರನಿಧಿಗಳ ಬಲವರ್ಧನೆಯಲ್ಲಿ ಸುಧಾರಣೆ ತರುವುದು.

  • ವಿಶೇಷ ಗುಂಪುಗಳನ್ನೊಳಗೊಂಡಂತೆ ಸಾಮಾಜಿಕ ಸೇವೆಗಳ ವಿತರಣೆಗೆ ಸಂಬಂಧಿಸಿದಂತೆ ಸ್ಥಳೀಯ ಪ್ರದೇಶಗಳಿಗೆ ಆದ್ಯತೆ ನೀಡುವುದು ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಸದ್ಬಳಕೆಯಿಂದ ಪಂಚಾಯತ್ ರಾಜ್‌ ಸಂಸ್ಥೆಗಳ ದಕ್ಷತೆ ಹೆಚ್ಚಿಸುವುದು.

  • ಗ್ರಾಮೀಣಾಭಿವೃದ್ಧಿ ಕುರಿತಂತೆ ಸಮಗ್ರ, ಆಳ ಜ್ಞಾನವುಳ್ಳ ಸಶಕ್ತ ಗ್ರಾಮೀಣ ಸಮೂಹಗಳನ್ನು ಅಭಿವೃದ್ಧಿಗೊಳಿಸುವುದು.

  • “ದೂರದೃಷ್ಟಿ ಯೋಜನೆ” – ಈ ಕಾರ್ಯ ತಂತ್ರದಿಂದ ಗ್ರಾಮೀಣ ಜನತೆಯ ಅವಶ್ಯಕತೆಗಳಿಗೆ ಅನುಗುಣವಾಗಿ 5 ವರ್ಷಗಳ ಕಾಲಮಿತಿ ಗುರಿಗಳನ್ನು ನಿಗದಿಪಡಿಸುವುದು ಹಾಗೂ ಯೋಜನೆ ರೂಪಿಸುವುದು.

  • ಮೂಲ ಸೌಕರ್ಯಗಳ ಅಭಿವೃದ್ಧಿಗೆ ಭಾದಕವಾಗಿರುವ ತೊಡಕುಗಳನ್ನು ನಿವಾರಿಸುವುದು.

  • ಆಡಳಿತದಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವುದು.

  • ರಾಜ್ಯದ ಹೊರಗೆ ಮತ್ತು ಒಳಗೆ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳ ನಡುವೆ ವಿವಿಧ ಸ್ಥರಗಳಲ್ಲಿ ಕಲಿಕೆ ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಸಹಾಯ ಹಾಗೂ ಬಲವರ್ಧನೆಯ ಮೂಲಕ ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಗೊಳಿಸುವುದು.

  • ಒಗ್ಗೂಡಿಸುವಿಕೆಯ ಮೂಲಕ ಆರ್ಥಿಕ ಮತ್ತು ಸಾರ್ವಜನಿಕ ನ್ಯಾಯವನ್ನು ಒದಗಿಸಲು ಸೂಕ್ತ ಸಾಧನೆಗಳೊಂದಿಗೆ ಸ್ಥಳೀಯ ಯೋಜನೆ ಪ್ರಕ್ರಿಯೆಗೆ ಅನುವು ಮಾಡಿಕೊಡುವುದು.

  • ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ 27 ಇಲಾಖೆಗಳಿಂದ ವಿವಿಧ ಯೋಜನೆಗಳ ಅಡಿ ಭಾರತ ಸರ್ಕಾರದಿಂದ ಹಂಚಿಕೆ ಮಾಡಲಾಗುವ ಸಂಪನ್ಮೂಲಗಳ ಸದ್ಬಳಕೆಗಾಗಿ ಗ್ರಾಮ ಪಂಚಾಯಿತಿಗಳನ್ನು ಕೇಂದ್ರ ಬಿಂದುಗಳನ್ನಾಗಿ ಪರಿಗಣಿಸಿ ವಿವಿಧ ಭಾಹ್ಯ ಸಂಸ್ಥೆಗಳ ಸೇವೆಗಳನ್ನು ಒಗ್ಗೂಡಿಸುವುದು.

  • ಭಾರತ ಸಂವಿಧಾನದ 1992 ರಲ್ಲಿ ಮಾಡಲಾದ 73ನೇ ತಿದ್ದುಪಡಿ ಮೂಲಕ 11ನೇ ಅನುಸೂಚಿಯಲ್ಲಿ ಗ್ರಾಮೀಣ ಸ್ಥಳೀಯ ಸರ್ಕಾರಗಳಿಗೆ ಹಂಚಿಕೆ ಮಾಡಿರುವ 29 ವಿಷಯಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಇಲಾಖೆಗಳ ಸಹಯೋಗ ಹಾಗೂ ಸಮನ್ವಯದಿಂದ ಪರಿಣಾಮಕಾರಿ ಸೇವೆಗಳ ವಿತರಣೆಯನ್ನು ಗ್ರಾಮ ಪಂಚಾಯಿತಿಗಳ ಮೂಲಕ ಕೇಂದ್ರೀಕೃತಗೊಳಿಸುವುದು.

  • ವೃತ್ತಿಪರ ವ್ಯಕ್ತಿಗಳು ಸಂಸ್ಥೆ ಸಾಮಾಜಿಕ ಸಂಸ್ಥೆಗಳು, ಉದ್ಯಮಗಳೊಂದಿಗೆ ಸಂಪರ್ಕ ಕಲ್ಪಿಸಿ ಅವುಗಳ ಸಹಭಾಗಿತ್ವದೊಂದಿಗೆ ಗ್ರಾಮೀಣ ಪ್ರದೇಶಗಳ ಪರಿವರ್ತನೆಯನ್ನು ಶೀಘ್ರಗೊಳಿಸುವುದು.

  • ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಸ್ವ-ಸಹಾಯ ಗುಂಪುಗಳ ಒಗ್ಗೂಡಿಸುವಿಕೆ – ವಿಶೇಷವಾಗಿ ಸ್ತ್ರೀ-ಶಕ್ತಿ ಗುಂಪುಗಳಿಗೆ ಅವಕಾಶ ನೀಡುವುದು.

  • ಸಾರ್ವಜನಿಕ ಕುಂದುಕೊರತೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ನೀಡುವುದು.

  • ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವುದಲ್ಲದೆ ಹಂಚಿಕೆ ಮಾಡಿರುವ ಅನುದಾನದ ಪರಿಣಾಮಕಾರಿ ಸದ್ಬಳಕೆಯ ಮೂಲಕ ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾಸ್ಥ್ಯೆವನ್ನು ಸುಧಾರಿಸುವುದು.

  • ಮಾನವ ಹಸ್ತಕ್ಷೇಪವಿಲ್ಲದೆ ಸಾರ್ವಜನಿಕರಿಂದ ಪಂಚತಂತ್ರ 2.0 ರಿಂದ ಗರೀಷ್ಟ ಮಟ್ಟದಲ್ಲಿ ಆಸ್ತಿ ತೆರಿಗೆ ವಸೂಲಾತಿ.

  • ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅವಶ್ಯಕತೆಗಳನ್ನು ಪೂರೈಸಲು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವುದು.

  • ಪ್ರತಿ ತಾಲ್ಲೂಕಿನಲ್ಲಿ ದೃಷ್ಟಿ ಸವಾಲಿಗೊಳಗಾದ ಬ್ರೈಲ್‌ ಹಾಗೂ ಶ್ರವ್ಯ ಪುಸ್ತಕಗಳ ವ್ಯವಸ್ಥೆ ಮತ್ತು ವಿಕಲಚೇತನ ಸ್ನೇಹಿಯಾಗುವುದರ ಮೂಲಕ “Beacon” ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವುದು.

  • ಅನೌಪಚಾರಿಕವಾಗಿ ಕೌಶಲ್ಯ ಅಭಿವೃದ್ಧಿ ಹಾಗೂ ಕಲಿಕೆ ಕ್ರಮವನ್ನು ವೃದ್ಧಿಪಡಿಸಲು ಗ್ರಾಮೀಣ ಜನತೆ ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ “ಗ್ರಾಮ ಡಿಜಿ ವಿಕಸನ” ಮೂಲಕ ಕಲಿಕೆಗೆ ಅನುವು ಮಾಡಿಕೊಡುವುದು.

*****

ಇತ್ತೀಚಿನ ನವೀಕರಣ​ : 15-09-2023 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ